News Events
  Untitled Document

  ಕ.ರಾ.ರ.ಸಾ.ನಿಗಮದ ಮಂಗಳೂರು, ಚಾಮರಾಜನಗರ ಮತ್ತು ಪುತ್ತೂರು ವಿಭಾಗಗಳ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ, ದರ್ಜೆ-3 ಹುದ್ದೆಗಳ ಆಯ್ಕೆಗಾಗಿ ಆನ್-ಲೈನ್ನಲ್ಲಿ ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳ ಮೂಲ ದಾಖಲಾತಿ ಪರಿಶೀಲನೆ ಹಾಗೂ ಚಾಲನಾ ವೃತ್ತಿ ಪರೀಕ್ಷೆಯನ್ನು ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳನ್ನು ಹೊರತುಪಡಿಸಿ ದಿನಾಂಕ 30.03.2015 ರಿಂದ ಕ.ರಾ.ರ.ಸಾ.ನಿಗಮ ತರಬೇತಿ ಅಕಾಡಮೆ ಆವರಣ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ, ಕೆ.ಎಂ.ಎಫ್. ವೃತ್ತ ಬಸ್ ನಿಲುಗಡೆ, ಹಾಸನ ಇಲ್ಲಿ ನಡೆಸಲಾಗುತ್ತಿದೆ. ಆದ್ದರಿಂದ, ಅಭ್ಯರ್ಥಿಗಳು ನಿಗಮದ ವೆಬ್ಸೈಟ್ “www.ksrtcjobs.com” ರಲ್ಲಿ ದಿನಾಂಕ 26.03.2015 ರಿಂದ ತಮ್ಮ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ ಕರೆಪತ್ರಗಳನ್ನು ಡೌನ್-ಲೋಡ್ ಮಾಡಿಕೊಂಡು ನಿಗದಿತ ದಿನಾಂಕದಂದು ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳೊಂದಿಗೆ ಹಾಜರಾಗಲು ಸೂಚಿಸಲಾಗಿದೆ.

   
  ಅಭ್ಯರ್ಥಿಗಳ ಗಮನಕ್ಕಾಗಿ

  ಜಾಹೀರಾತು ಸಂ. 1/2015 ರಡಿ ಚಾಲಕ ಮತ್ತು ಚಾಲಕ/ಚಾಲಕ-ಕಂ-ನಿರ್ವಾಹಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ನೋಂದಣಿ ಸಂ. D000005 ರಿಂದ D018077 ರವರೆಗಿನ ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳಿಗೆ ಭಾನುವಾರ ಮತ್ತು ಸಾರ್ವಜನಿಕ ರಜೆ ದಿನಗಳನ್ನು ಹೊರತುಪಡಿಸಿ ದಿನಾಂಕ 30.03.2015 ರಿಂದ 16.05.2015 ರವರೆಗೆ ಮೂಲ ದಾಖಲಾತಿ ಪರಿಶೀಲನೆ ಹಾಗೂ ಚಾಲನಾ ವೃತ್ತಿ ಪರೀಕ್ಷೆಗೆ ಹಾಜರಾಗಲು ನಿಗಮದ ವೆಬ್-ಸೈಟ್‍ನಿಂದ ಕರೆಪತ್ರಗಳನ್ನು ಡೌನ್-ಲೋಡ್ ಮಾಡಿಕೊಳ್ಳಬಹುದಾಗಿದೆ.

  ಉಳಿದ ಅಭ್ಯರ್ಥಿಗಳು ಕರೆಪತ್ರಗಳನ್ನು ಡೌನ್-ಲೋಡ್ ಮಾಡಿಕೊಳ್ಳಲು ದಿನಾಂಕ 11.05.2015ರ ನಂತರ ವೆಬ್-ಸೈಟ್‍ಅನ್ನು ವೀಕ್ಷಿಸುವುದು.

   

  ಕ.ರಾ.ರ.ಸಾ.ನಿಗಮದ ವಿಭಾಗಗಳಿಗೆ ಅವಶ್ಯವಿರುವ ಈ ಕೆಳಕಂಡ ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ ದರ್ಜೆ-3 ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ನಿಗಮದ ವೆಬ್‍ಸೈಟ್ “www.ksrtcjobs.com ರಲ್ಲಿ ಆನ್-ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

  ಮೇಲ್ಕಂಡ ಹುದ್ದೆಗಳ ಮೀಸಲಾತಿ ವರ್ಗೀಕರಣವನ್ನು ವಿವರವಾಗಿ ಜಾಹೀರಾತಿನಲ್ಲಿ ತಿಳಿಸಲಾಗಿದೆ. ಆದ್ದರಿಂದ ಜಾಹೀರಾತು ಹಾಗೂ ವೆಬ್-ಸೈಟ್ನಲ್ಲಿರುವ ಮಾಹಿತಿಗಳನ್ನು ಓದಿ ಮನದಟ್ಟು ಮಾಡಿಕೊಂಡು ನಂತರ ಅರ್ಜಿ ಸಲ್ಲಿಸುವುದು.
   

  ವಿಭಾಗ

  ಹುದ್ದೆಗಳ ಸಂಖ್ಯೆ
  ಚಾಲಕ ಚಾಲಕ-ಕಂ-ನಿರ್ವಾಹಕ
  ಬೆಂಗಳೂರು ಕೇಂದ್ರ 285 362
  ಬೆಂಗಳೂರು ಕೇಂದ್ರ (ಹೈ-ಕ 371-ಜೆ) 25 31
  ರಾಮನಗರ 190 242+8(ಪ.ಜಾ.ಹಿಂಬಾಕಿ)
  ತುಮಕೂರು 176 224
  ಕೋಲಾರ 195 248
  ಮೈಸೂರು ನಗರ ಸಾರಿಗೆ 107 136
  ಮೈಸೂರು ಗ್ರಾಮಾಂತರ 188 239
  ಹಾಸನ 202 258
  ಚಿಕ್ಕಮಗಳೂರು 172 218
  ದಾವಣಗೆರೆ 397 506
  ಮಂಡ್ಯ 163 207
  ಚಿಕ್ಕಬಳ್ಳಾಪುರ 211 269+7(ಪ.ಜಾ.ಹಿಂಬಾಕಿ)

  ಮೇಲ್ಕಂಡ ಹುದ್ದೆಗಳ ಮೀಸಲಾತಿ ವರ್ಗೀಕರಣವನ್ನು ವಿವರವಾಗಿ ಜಾಹೀರಾತಿನಲ್ಲಿ ತಿಳಿಸಲಾಗಿದ್ದು, ಅರ್ಜಿ ಸಲ್ಲಿಸಲು/ಹೆಚ್ಚಿನ ವಿವರಗಳಿಗಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವೆಬ್‍ಸೈಟ್ “www.ksrtcjobs.com” ಅನ್ನು ವೀಕ್ಷಿಸುವುದು.

  ಆನ್‍ಲೈನ್ ಪ್ರಾರಂಭ ದಿನಾಂಕ  : 30.03.2015
  ಆನ್‍ಲೈನ್ ಅಂತಿಮ ದಿನಾಂಕ  : 18.04.2015 ಸಮಯ : ಸಂಜೆ 05.30 ಘಂಟೆ.
  ಅರ್ಜಿ ಶುಲ್ಕ ಪಾವತಿಗೆ ಅಂತಿಮ ದಿನಾಂಕ : 20.04.2015 (ಅಂಚೆ ಕಚೇರಿ ವೇಳೆಯಲ್ಲಿ)

New Updates
ಪತ್ರಿಕಾ ಪ್ರಕಟಣೆ – ಚಾಲಕ ಮತ್ತು ಚಾಲಕ-ಕಂ-ನಿರ್ವಾಹಕ-2015 ಹುದ್ದೆಯ ಕರೆಪತ್ರ

Copyright: @ 2014 KSRTC Website: www.ksrtc.in Toll Free No: 080-44554422
*This link / page is best viewed in IE 8 and above, Mozilla Firefox & Google Chrome